'ಬಿಗ್ ಬಾಸ್ ಕನ್ನಡ-5' ವಿನ್ನರ್ ಯಾರಾಗಬೇಕು.? ಎಂದು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ನಲ್ಲಿ ಆಯೋಜಿಸಿದ್ದ ಲೈವ್ ವೋಟಿಂಗ್ ಪೋಲ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಫಲಿತಾಂಶ ಪ್ರಕಟ ಮಾಡುವ ಸಮಯ ಬಂದಿದೆ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಹೆಜ್ಜೆ ಇಟ್ಟಿರುವ ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್, ನಿವೇದಿತಾ ಗೌಡ ಹಾಗೂ ಶ್ರುತಿ ಪ್ರಕಾಶ್ ಮಧ್ಯೆ ನಿನ್ನೆ ಜನವರಿ 25 ರಂದು 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಚುನಾವಣೆ ನಡೆಸಲಾಗಿತ್ತು. ಇವರ ಪೈಕಿ ಅತಿ ಹೆಚ್ಚು ಮತ ಲಭಿಸಿದ್ದು ಒಬ್ಬರಿಗೆ ಮಾತ್ರ.! ಯಾರದು.?
ಮೂರು ಲಕ್ಷ ಜನರಿಗೆ ರೀಚ್ ಆದ ಈ ಲೈವ್ ಪೋಲ್ ನ 47 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಪೈಕಿ ಹಲವರು ಲೈವ್ ಪೋಲ್ ವೋಟಿಂಗ್ ನಲ್ಲಿ ಪಾಲ್ಗೊಂಡು ಚಂದನ್ ಶೆಟ್ಟಿಗೆ ಬೆಂಬಲ ನೀಡಿದ್ದಾರೆ.
Bigg Boss Kannada 5: According to Filmibeat Kannada Facebook Live Poll, Chandan Shetty should become Winner of #BBK5.